Paravashanadenu Song lyrics in kannada

Paravashanadenu | Paramathma Movie Lyrics Song | Puneeth Rajkumar | Deepa Sannidhi | Yograj Bhat - Sonu Nigam Lyrics


Singer Sonu Nigam
Music V Harikrishna
Song Writer Jayanth Kaikini

ಪರವಶನಾದೆನು ಅರಿಯುವ ಮುನ್ನವೇ
ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ
ಇದಕ್ಕಿಂತ ಬೇಗ ಇನ್ನು ಸಿಗಬಾರದಿತ್ತೆ ನೀನು
ಇನ್ನಾದರೂ ಕೂಡಿಟ್ಟುಕೋ ನೀ ನನ್ನನು ಕಳೆಯುವ ಮುನ್ನವೇ

ಪರವಶನಾದೆನು ಅರಿಯುವ ಮುನ್ನವೇ
ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ
ನಿನ್ನ ಕಣ್ಣಿಗಂತು ನಾನು ನಿರುಪಯೋಗಿ ಈಗಲೂ
ಇನ್ನು ಬೇರೆ ಏನು ಬೇಕು ಪ್ರೇಮಯೋಗಿಯಾಗಲು
ಹೂ ಅರಳುವ ಸದ್ದನು ನಿನ್ನ ನಗೆಯಲಿ ಕೇಳಬಲ್ಲೆ
ನನ್ನ ಏಕಾಂತವನ್ನು ತಿದ್ದಿಕೊಡು ನೀನೀಗ ನಿಂತಲ್ಲೆ
ನಾನೇನೆ ಅಂದರೇನು ನನಗಿಂತ ಚೂಟಿ ನೀನು
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನು ಕದಿಯುವ ಮುನ್ನವೇ

ಪರವಶನಾದೆನು ಅರಿಯುವ ಮುನ್ನವೇ
ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ
ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ
ನನ್ನ ಕೌತುಕ ಒಂದೊಂದೇ ಹೇಳಬೇಕು
ಆಲಿಸುವಾಗ ನೋಡು ನನ್ನನ್ನೆ ಸಾಕು
ಸಹವಾಸದೋಷದಿಂದ ಸರಿ ಹೋಗಬಹುದೇ ನಾನು
ನನಗಾಗಿಯೇ ಕಾದಿಟ್ಟುಕೊ ಹಟವೊಂದನ್ನು ಕೆಣಕುವ ಮುನ್ನವೇ

ಪರವಶನಾದೆನು ಅರಿಯುವ ಮುನ್ನವೇ
ಪರಿಚತನಾಗಲಿ ಹೇಗೆ ಪ್ರಣಯಕು ಮುನ್ನವೇ



Reactions

Post a Comment

0 Comments